ಮಿಸ್ಟರ್ ಪರ್ಫೆಕ್ಟ್ ಎಂಬ ತೆಲುಗು ಚಿತ್ರದ "ಚಲಿ ಚಲಿಗಾ ಅಲ್ಲಿಂದಿ" ಹಾಡಿನ ಧಾಟಿಗೆ ಕನ್ನಡದ ಸಾಲುಗಳನ್ನು ಸೇರಿಸುವ ೧ ಪ್ರಯತ್ನ!! ಮೂಲ ಹಾಡನ್ನು ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ಕೇಳಿ :
ಗಾಯಕಿ--ಶ್ರೇಯಾ ಘೋಶಾಲ್
ನಲಿ ನಲಿವಾ ಕನಸೊಂದು ಸನಿ ಸನಿಹ ಬಂದಂತೆ ಕಂಡಿರುವ ಕನಸೆಂಥಾ ಸೊಗಸು
ಪ್ರತಿ ಪುಟದಲ್ಲೂ ನಿನ್ನ ಹೆಸರನೆ ಬರೆವಾ ಚಟವು ಅತಿಯಾಗಿದೆ ಕಾಗದವ ಕಳಿಸು
ಸಿಹಿಯಾದ ಸಲುಗೆ ನೀಡುವೆಯಾ ನನಗೆ
ಬದಲಾಗಿ ನಿನಗೆ ನೀಡಲೇ ತೆರಿಗೆ!!
ಸರಿಯಾದ ಕಡೆಗೆ ಬೇಕಿಲ್ಲ ನಡಿಗೆ
ನೀ ಇದ್ದರೆ ಸಾಕು ನನ್ನ ಜೊತೆಗೆ...
ಭಾವದ ಏರಿಳಿತ ಆಗಲು ವಿಪರೀತ
ಪರಿಚಿತರು ಜೊತೆಗಿರಲು ಸಂತಸ ಖಚಿತ
ನನ್ನ ಕಣ್ಣಲ್ಲಿ ಕಣ್ಣಿಟ್ಟು ಮನಸನ್ನು ಅಡವಿಟ್ಟು ಮೌನಕ್ಕೆ ಕಿವಿಗೊಟ್ಟು ಆsssಲಿಸು...
ಸಣ್ಣ ಪಯಣಕ್ಕೆ ಅಡಿಯಿಟ್ಟು ಏಕಾಂತ ಬಲಿ ಕೊಟ್ಟು ನನ್ನನ್ನು ದಯವಿಟ್ಟು ನೀನೇ ಸಹಿಸು.
ಪರಿವಿಡಿ ಮುನ್ನುಡಿಯಲ್ಲೂ ನೀನೇನೇ...
ಸೆಳೆಯುವ ತೆರೆಗಳ ಹಾಗೆ ನೀssನುsss ..
ಒಲವಿನ ಪರಿಧಿಯ ಹೊರಗೆ ಬರದೇನೇ
ಪರದೆಯ ತೆರೆಯದೆ ಇರಲೇನುsss ...
ಪರದೆಯ ತೆರೆಯದೆ ಇರಲೇನುsss ...
ನನ್ನ ಕಣ್ಣಲ್ಲಿ ಕಣ್ಣಿಟ್ಟು ಮನಸನ್ನು ಅಡವಿಟ್ಟು ಮೌನಕ್ಕೆ ಕಿವಿಗೊಟ್ಟು ಆsssಲಿಸು...
ಸಣ್ಣ ಪಯಣಕ್ಕೆ ಅಡಿಯಿಟ್ಟು ಏಕಾಂತ ಬಲಿ ಕೊಟ್ಟು ನನ್ನನ್ನು ದಯವಿಟ್ಟು ನೀನೇ ಸಹಿಸು.
ಪರಿಚಯದ ದಿನವೇ ಮರೆತೆನು ನಾ ಜಗವೆ..
ಏನೇ ನೀ ಹೇಳು... ನಾ ಕೇಳುವೆ..
ಅತಿಯಾದ ಗಮನ ಬಯಸಿದೆ ಈ ನಯನ
ನೀಡಿ ಉಪಕರಿಸು ಉಳಿದೆಲ್ಲ ದಿನ..
ನಿನ್ನ ನೋಡಿ ಆ ಸೂರ್ಯನು ಮೋಡಿ..
ಬಂದನು ಓಡೋಡಿ ಬೆಳಕನು ಬೇಡಿ
ಬಂದಂತೆ ಹಾಡಿ ಬಿಡದಂತೆ ಕಾಡಿ
ಕೊನೆವರೆಗೂ ಜೊತೆ ಬರುವೆ ನೀ ಮುಂದೆ ನಡಿ..
ನನ್ನ ಕಣ್ಣಲ್ಲಿ ಕಣ್ಣಿಟ್ಟು ಮನಸನ್ನು ಅಡವಿಟ್ಟು ಮೌನಕ್ಕೆ ಕಿವಿಗೊಟ್ಟು ಆsssಲಿಸು...
ಸಣ್ಣ ಪಯಣಕ್ಕೆ ಅಡಿಯಿಟ್ಟು ಏಕಾಂತ ಬಲಿ ಕೊಟ್ಟು ನನ್ನನ್ನು ದಯವಿಟ್ಟು ನೀನೇ ಸಹಿಸು.
ಸಿಹಿಯಾದ ಸಲುಗೆ ನೀಡುವೆಯಾ ನನಗೆ
ಬದಲಾಗಿ ನಿನಗೆ ನೀಡಲೇ ತೆರಿಗೆ!!
ಸರಿಯಾದ ಕಡೆಗೆ ಬೇಕಿಲ್ಲ ನಡಿಗೆ
ನೀ ಇದ್ದರೆ ಸಾಕು ನನ್ನ ಜೊತೆಗೆ...
ಭಾವದ ಏರಿಳಿತ ಆಗಲು ವಿಪರೀತ
ತಪ್ಪಿದೆ ಅನುಪಾತ ನಾ ಶರಣಾಗತ...
ಬೇಕಿದೆ ಸಂಗಾತ ಕೇಳುತ ಸಂಗೀತಪರಿಚಿತರು ಜೊತೆಗಿರಲು ಸಂತಸ ಖಚಿತ
ನನ್ನ ಕಣ್ಣಲ್ಲಿ ಕಣ್ಣಿಟ್ಟು ಮನಸನ್ನು ಅಡವಿಟ್ಟು ಮೌನಕ್ಕೆ ಕಿವಿಗೊಟ್ಟು ಆsssಲಿಸು...
ಸಣ್ಣ ಪಯಣಕ್ಕೆ ಅಡಿಯಿಟ್ಟು ಏಕಾಂತ ಬಲಿ ಕೊಟ್ಟು ನನ್ನನ್ನು ದಯವಿಟ್ಟು ನೀನೇ ಸಹಿಸು.
ಚಂದ ಭರದ್ಯೋ................ಭಟರ್ರೆ
ReplyDeleteರಾಮು
thanku raam bhai;-)
ReplyDelete