"ಇಷ್ಕಿಯಾ" ಎಂಬ ಹಿಂದಿ ಚಿತ್ರದ "ದಿಲ್ ತೋ ಬಚ್ಚಾ ಹೇ ಜಿ" ಹಾಡಿನ
ಧಾಟಿಗೆ ಕನ್ನಡದ ಸಾಲುಗಳನ್ನು ಸೇರಿಸುವ ೧ ಪ್ರಯತ್ನ!! ಮೂಲ ಹಾಡನ್ನು ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ಕೇಳಿ :
http://www.youtube.com/watch?v=BgWaZ0W_1zI
ಮನದ ಅತಿಕ್ರಮಣ ನಿನ್ನಿಂದ ಮೊದಲಾಗಿದೆ. .
http://www.youtube.com/watch?v=BgWaZ0W_1zI
ಮನದ ಅತಿಕ್ರಮಣ ನಿನ್ನಿಂದ ಮೊದಲಾಗಿದೆ. .
ನಿನ್ನ ಕಡೆ ಗಮನ ಅರಿವಿರದೆ ಅತಿಯಾಗಿದೆ . .
ಇರದ ಭಾವನೆಗೂ ಕರೆಮಾಡೋ ಮನಸಾಗಿದೆ. .
ಭಾವದ ಸಂಪುಟಗಳ ಸಂಪಾದಕಿ ಸಿಕ್ಕಂತಿದೆ. .
ಇರದ ಭಾವನೆಗೂ ಕರೆಮಾಡೋ ಮನಸಾಗಿದೆ. .
ಭಾವದ ಸಂಪುಟಗಳ ಸಂಪಾದಕಿ ಸಿಕ್ಕಂತಿದೆ. .
ನಿನ್ನಾ ಪ್ರತಿಫಲನ.. ಕಾಣಲು ಪದೆ ಪದೆ ನಾ. .
ಹೊಸ ರೀತಿಯ ಜನನ.. ಮಾತೆಲ್ಲವೂ ಮೌನ. .
ಸಂಕಟವೂ ಸಂಭ್ರಮವೂ ಹೊಸದಾಗಿದೆ. .
ಮನಸು ಮಗುವಾಗಿದೆ.. ಮನಸು ಮಗುವಾಗಿದೆ. .
ಕನಸು ಕಳುವಾಗಿದೆ.. ಮನಸು ಮಗುವಾಗಿದೆ. .
ಪ್ರೀತಿಯ ಕಂದಾಯ ಮಾಡಲು ಸಂದಾಯ.. ಪರಿತಪಿಸುತಿದೆ ನSSನ್ನ ಕಾಯ. .
ಬೇಗನೆ ಸ್ವೀಕರಿಸಿ ನನ್ನನು ಉಪಕರಿಸು.. ಹಾಳಾದರು ಸರಿ ನಿನ್ನ ಸಮಯ. .
ಮನದ ಅಂತಃಪುರ. . ಆವರಿಸಲೇ ನಾ ಪೂರಾ. .
ಬೇಡ ಸರಿಯುತ್ತರ. . ಗೊಂದಲಗಳೇ ಸುಂದರ. .
ಗುರಿಯೇ ಇರದಾSSS.. ಸಂಚಾರೀ ಆದೆನಾSS . .
ಬೇಗನೆ ಸ್ವೀಕರಿಸಿ ನನ್ನನು ಉಪಕರಿಸು.. ಹಾಳಾದರು ಸರಿ ನಿನ್ನ ಸಮಯ. .
ಮನದ ಅಂತಃಪುರ. . ಆವರಿಸಲೇ ನಾ ಪೂರಾ. .
ಬೇಡ ಸರಿಯುತ್ತರ. . ಗೊಂದಲಗಳೇ ಸುಂದರ. .
ಗುರಿಯೇ ಇರದಾSSS.. ಸಂಚಾರೀ ಆದೆನಾSS . .
ಹಳತಾಗದ ಒಡವೆ. . ನಿನ್ನಾ ಈ ನಗುವೇ. .
ಬಗೆಹರಿಯದು ಒಲವೆ !! ಪರಿಹರಿಸೆಯಾ ಚೆಲುವೆ. .
ತಡವಾದರೂ ತಡೆ ನೀಡದೆ ಬರಬಾರದೇ??. .
ಗೆಲುವು ಕಳುವಾಗಿದೆ.. ಗೆಲುವು ಕಳುವಾಗಿದೆ. .
ಒಲವು ಬಲವಾಗಿದೆ.. ಗೆಲುವು ಕಳುವಾಗಿದೆ. .
ಬಗೆಹರಿಯದು ಒಲವೆ !! ಪರಿಹರಿಸೆಯಾ ಚೆಲುವೆ. .
ತಡವಾದರೂ ತಡೆ ನೀಡದೆ ಬರಬಾರದೇ??. .
ಗೆಲುವು ಕಳುವಾಗಿದೆ.. ಗೆಲುವು ಕಳುವಾಗಿದೆ. .
ಒಲವು ಬಲವಾಗಿದೆ.. ಗೆಲುವು ಕಳುವಾಗಿದೆ. .
ನಿನ್ನಂತರಾಳSSS ನೀಡುವ ಈ ಪ್ರೀತಿ, ಎಷ್ಟೇ ಆದರೂ ಸಾಲದ ಸಾಲ. .
ಅದು ಕಡಿಮೆ ಎನಿಸಿ ನಿನ್ನನೆ ನಾ ಮತ್ತೆ ಕೇಳುವ ಮೊದಲೇ ನೀಡು ಬಹಳ. .
ನಿನ್ನ ಆ ಮುಂಗುರುಳ.. ಸರಿಪಡಿಸಲೇ ಒಂದು ಸಲ. .
ಕಂಡೆನು ಬೆಳದಿಂಗಳ.. ನೋಡುತ ಈ ಕಂಗಳ. .
ಮರೆತು ಕೂಡSS.. ನೀ ಮರೆಯಾಗಲೆಬೇಡSS . .
ಅದು ಕಡಿಮೆ ಎನಿಸಿ ನಿನ್ನನೆ ನಾ ಮತ್ತೆ ಕೇಳುವ ಮೊದಲೇ ನೀಡು ಬಹಳ. .
ನಿನ್ನ ಆ ಮುಂಗುರುಳ.. ಸರಿಪಡಿಸಲೇ ಒಂದು ಸಲ. .
ಕಂಡೆನು ಬೆಳದಿಂಗಳ.. ನೋಡುತ ಈ ಕಂಗಳ. .
ಮರೆತು ಕೂಡSS.. ನೀ ಮರೆಯಾಗಲೆಬೇಡSS . .
ನೀನಿರದಾ ದಿವಸ. . ನೆನಪಿಗೆ ಶುರು ಕೆಲಸ . .
ಅಪರೂಪದ ವಿರಸ. . ಕಂಗೆಡಿಸಿದೆ ಮನಸಾ..
ಕಲುಷಿತವೋ ಬಲುಹಿತವೋ ಅರಿವಾಗದೇ!!
ಮನಸೇ ಮಗುವಾಗಿದೆ..ಕನಸೇ ಕಳುವಾಗಿದೆ. .
ಒಲವು ಬಲವಾಗಿದೆ.. ಮನಸೇ ಮಗುವಾಗಿದೆ.
ಅಪರೂಪದ ವಿರಸ. . ಕಂಗೆಡಿಸಿದೆ ಮನಸಾ..
ಕಲುಷಿತವೋ ಬಲುಹಿತವೋ ಅರಿವಾಗದೇ!!
ಮನಸೇ ಮಗುವಾಗಿದೆ..ಕನಸೇ ಕಳುವಾಗಿದೆ. .
ಒಲವು ಬಲವಾಗಿದೆ.. ಮನಸೇ ಮಗುವಾಗಿದೆ.
No comments:
Post a Comment