Thursday, August 26, 2010

ಅಸಂಬದ್ಧ ?!

ದಾರಿಹೋಕನ ಪ್ರಯಾಣ ಸಾಲುಮನೆಗಳಿರುವ ಬೀದಿಯಲ್ಲಿ ಸಾಗಿತ್ತು..
೧ ಮನೆಯಿಂದ 'ತೆರೆದಿದೆ ಮನೆ ಓ ಬಾ ಅತಿಥಿ'  
ಎಂಬ ಹಾಡು ಗಾಳಿಯಲ್ಲಿ ತೇಲಿ ಬರುತ್ತಿತ್ತು..
ಮನೆಯ ಬಾಗಿಲು ತೆರೆದಿತ್ತು. .   ಆತ ಮನೆಯೊಳಗೆ ಹೋದ..  
ಹಾಡು ನಿಂತಿತು..   ಆತ ಮನೆಯ ಬಾಗಿಲನ್ನು ಮುಚ್ಚಿದ..

ಹಲುಬುವುದು ಎಂದರೆ..

ಕೆಲವೊಮ್ಮೆ ಬದುಕಲು ಸಾಯಬೇಕು ಅನಿಸಿದರೆ..
ಮತ್ತೊಮ್ಮೆ ಸಾಯಬೇಕಲ್ಲ ಅಂತ ಬದುಕಬೇಕೆನಿಸುತ್ತೆ.
ಈ ಪರಮಾತ್ಮ ವಿನಾಕಾರಣ ಬೇಸರಗೊಳ್ಳುತ್ತಾನೆ,
ಬೇಸರಿಕೆಗೆ ಕಾರಣವಾದ ಕಾರಣವನ್ನು ಹುಡುಕಲೂ ಬೇಸರವಾಗುವಷ್ಟು!!
ಬೇಸರಗೊಳ್ಳಲು ಕಾರಣವಾದ ಕಾರಣ ಸಿಗದ ಕಾರಣ ಮತ್ತೆ ಬೇಸರಗೊಳ್ಳುತ್ತಾನೆ..
ಕುಳಿತುಕೊಳ್ಳುತ್ತಾನೆ...........,        ಕಾಯುತ್ತಾನೆ..........,          
ಬೇಸರ ನೀಗುವ ನೇಸರನಿಗಾಗಿ.........,         ಒಂದು ಅದೃಶ್ಯ ಚೈತನ್ಯಕ್ಕಾಗಿ.........

Saturday, August 14, 2010

@! ಪ್ರಸಂಗದಲ್ಲಿನ ಅಧಿಕಗಳು !@

ದುಃಖವೂ ಸಂಭ್ರಮಿಸಲ್ಪಟ್ಟಾಗ ಸಂತೋಷದ ಸಮಾಧಿಯಾಗುತ್ತದೆ.


'ಕಲೆ'ಯಿಂದಾದ   "ಕಲೆ"ಯನ್ನು   ಅಳಿಸುವುದೂ   ಒಂದು   ಕಲೆ!!


"ದೇವರು" ಒಂದು ಕಾಲ್ಪನಿಕ ಸತ್ಯ.
 

 "ಕಾಮ"ವು ಪೂರ್ಣವಿರಾಮಕ್ಕೆ ಮುನ್ನುಡಿ !!



"ಪ್ರತಿಯೊಂದು ಪರಿಹಾರದ ಹಿಂದೆಯೂ ಒಂದು ಸಮಸ್ಯೆ ಇದ್ದೇ ಇರುತ್ತದೆ" 



" ಸಂಭ್ರಮಕ್ಕಿಲ್ಲ 'ಕೊನೆ' " ....
                       ಅಡಿಕೆ? ಬಾಳೆ??



"ಪ್ರೀತ್ಸೋರೆಲ್ಲ ಮದುವೆ ಆಗಕಾಗಲ್ಲ..
ಮದುವೆ ಆದವರೆಲ್ಲ ಪ್ರೀತಿಸಲೇ ಬೇಕಂತಿಲ್ಲ..
ಗೊತ್ತಿದ್ದೂ ಮಾಡೋ ತಪ್ಪಿಗೆ ಅನಿವಾರ್ಯವಾಗಿ ಪ್ರೀತಿಸಬೇಕಾಗುತ್ತದೆ"
- ತಂತ್ರಾಂಶ ತಂತ್ರಜ್ಞ ತನ್ನ ಕೆಲಸದ ಕುರಿತು..