ಅಂದು ಕಾಲೇಜಿನಲ್ಲಿ ನಾನು 'ಪ್ರೀತಿ ಪ್ರೇಮ ಪೂರ್ಣವಿರಾಮ' ಅನ್ನೋ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ಎಲ್ಲಿಂದಲೋ ಬಂದು ಎಕ್ಸ್ ಕ್ಯೂಸ್ ಮಿ ಹೇಳಿ ನೀ ಕುಳಿತುಕೊಳ್ಳದೇ ಹೋಗಿದ್ದರೆ, ಇಂದು ನಿನ್ನ ವಿಷಯದಲ್ಲಿ ನಾ ಇಷ್ಟು ದೂರ ಬರುತ್ತಲೇ ಇರಲಿಲ್ಲವೇನೋ! ಆಗಲೇ ನನಗನಿಸಿದ್ದು ಇಷ್ಟು ದಿನ ನಾನು ಅಂದುಕೊಂಡಿದ್ದು, ವಾದಿಸಿದ್ದು ಎಲ್ಲ ಸುಳ್ಳು ಎಂದು! ಬಸ್ಸಿನಲ್ಲಿ ಯಾರದೋ ಗೊತ್ತಿಲ್ಲದವನ ಕಾಲಿನಮೇಲೆ ಒಂದು ಕಾಲನ್ನು ಇಟ್ಟು ನಿಂತಿರುವಾಗ ಕಂಡ ನಿನ್ನ ನಗು, ನನ್ನ ಮನಸ್ಸೂ ನಗುವಂತೆ ಮಾಡಿತ್ತು. ಮೊದಲಿನಿಂದಲೂ ಪ್ರೀತಿ ಅಂದರೆ ಒಂದು ಸುಂದರ ಗೊಂದಲ. ದೇವರ ಥರ! ಅದೇ ಸರಿ ಎಂದು ಖಚಿತವಾಗಲು ನೀ ಕಾರಣವಾದೆ ಅಷ್ಟೇ.
ನೀ ಸಾಹಿತ್ಯಪ್ರೇಮಿ ಸರಿ, ಆದರೆ ಅದೊಂದೇ ಕಾರಣಕ್ಕೆ ಜೀವನ ಪೂರ್ತಿ ಜೊತೆ ಇರ್ತೀನಿ ಬರ್ತೀಯಾ ಅಂತ ಕೇಳೋಕ್ ಬಂದಾಗ ಒಂದೆರಡು ಸಾಲಾದ್ರೂ ಪ್ರೀತಿ ಪರವಾಗಿ ಹೇಳು ನೋಡೋಣ ಅಂತ ಅಂದ್ಯಲ್ಲ, ಏನು ಮಾತಾಡದೆ ನಾನ್ ಸುಮ್ನಿದ್ದಿದ್ರೆ ಬಿಟ್ ಹೊಗೊರ್ ಥರ !! ನಾನೂ ಕಷ್ಟಪಟ್ಟು ಏನೋ ಅಂದೆ,
"ನಾನಿರ್ತೀನಿ ನಿನ್ನ ಮೌನಕ್ಕೆ ಮಾತಾಗಿ, ಮಾತಿಗೆ ಮೌನವಾಗಿ. ನಾನಿರ್ತೀನಿ ನಿನ್ನ ಬದುಕಿನ ಕನಸಾಗಿ,ಕನಸಿನ ಬದುಕಾಗಿ. ನಾನಿರ್ತೀನಿ ನಿನ್ನ ನೆನಪುಗಳಿಗೆ ನೆಪವಾಗಿ, ನೆಪವೇ ಬೇಕಿರದ ನೆನಪಾಗಿ"
ಇದನ್ ಕೇಳಿ ನಿನ್ ಮುಖದಲ್ಲಿ ಮತ್ತೆ ಅದೇ ನಗು, ಆಗಲೇ ಅನಿಸಿದ್ದು ನಂಗೆ ಬದುಕು ಈಗ ಸುಲಭ ಅಂತ.
ನೀನು ಚಾಟ್ ಮಾಡದೆ ಅಪ್ಪಿ ತಪ್ಪಿಯೂ ಕರೆ ಮಾಡದೆ ವಿಸ್ಮಯ ಹುಟ್ಟಿಸಿದ್ದೆ. ಅದಕ್ಕೆ ಇರಬೇಕು ವಾರಕ್ಕೆರಡು ಬಾರಿ ಕಾಲೇಜಿನಲ್ಲಿ ಆಗುವ ಪ್ರತಿ ಭೇಟಿಯೂ ತುಂಬಾ ಅಪರೂಪ ಎನಿಸುತ್ತಿದ್ದದ್ದು. ನಿನ್ನನ್ನು ಒಂದ್ ಸಲಾನೂ ಫಿಲಂ ನೋಡೋಕಾಗಲಿ, ಸುತ್ತೋದಕ್ಕಾಗ್ಲಿ ಕರೀಬೇಕು ಅಂತಾನೆ ಅನ್ನಿಸ್ತಿರ್ಲಿಲ್ಲ, ಬಹುಶಃ ನಿನ್ನ ಸ್ವಭಾವ ಗೊತ್ತಿರೋದ್ರಿಂದ ನಂಗೆ ಸೋಲೋಕ್ ಇಷ್ಟ ಇರ್ಲಿಲ್ಲ. ಒಂದ್ ದಿನ ಸಿಕ್ದಾಗ ಏನೋ ಸಾಹಿತಿಗಳ ವಿಷಯ ಬಂತು. ಜಯಂತ್ ಕಾಯ್ಕಿಣಿ ಏನ್ ಮಹಾ, ಬರೀ ಪ್ರೀತಿ ವರ್ಣಿಸಿ ಪದ್ಯ ಬರೀತಾರೆ ಅಂದಿದ್ದಕ್ಕೆ ಕೂಡಲೇ ನಿನ್ನ ಮೊಬೈಲ್ ನಲ್ಲಿರುವ ಕನ್ನಡ ಜೀವಸ್ವರ ಅನ್ನೋ ಹಾಡನ್ನ ಕೇಳಿಸಿ ಅದರಲ್ಲಿ ಬರುವ 'ವಿನಿಮಯ ಕನ್ನಡ ವಿನಯವೇ ಕನ್ನಡ ಮಹಿಳೆಯ ಸ್ವಾಭಿಮಾನ ಕನ್ನಡ' ಅನ್ನೋ ಸಾಲನ್ನು ವರ್ಣಿಸಿದ್ದು ಕೇಳಿ ನನ್ನ ಬಾವಿಯಲ್ಲಿರುವ ಕಪ್ಪೆ ಹೊರಗಡೆ ಹಾರಿದಂತಾಯ್ತು. ಸರಿಯಾಗಿ ತಿಳಿದುಕೊಳ್ಳದೆ ನಾ ಹೇಳೋದೇ ಸರಿ ಅನ್ನೋ ನನ್ನತನ ನಿನ್ನ ಮುಂದೆ ಸಣ್ಣದಾಯಿತು . ನೀನು ಒಂದ್ ಸಲ ಸುಮ್ನೆ ನಗ್ತಾ ಇದ್ದೆ, ಯಾಕೆ ಕೇಳಿದ್ರೆ ಮುಖ್ಯಮಂತ್ರಿ ಚಂದ್ರು ನಗೋ ಸೀನ್ ನೆನಪಾಯ್ತು ಅಂದಿದ್ದೆ . ಇನ್ನೊಂದ್ ದಿನ ಮಧ್ಯಾನ್ನ ಕಾಲೇಜಿನಲ್ಲಿ ನಿನ್ನ ಮಾತಾಡ್ಸೋಕೆ ಅಂತ ಬಂದಾಗ ಕಣ್ಣನ್ ಪೂರ್ತಿ ವದ್ದೆ ಮಾಡ್ಕೊಂಡ್ ಕೇಳಿದ್ದೆ, ಈ ಏಡ್ಸ್ ಇರೋ ಚಿಕ್ಕ ಮಕ್ಕಳದ್ದು ಎಂತ ದುರಂತ ಆಲ್ವಾ, ಅವರಿಗೆ ಇರೋ ರೋಗದ ಭೀಕರತೆ ಬಗ್ಗೆ ಗೊತ್ತಿಲ್ಲ, ತಾವ್ ಸ್ವಲ್ಪ ದಿನದಲ್ಲೇ ಸಾಯ್ತೀವಿ ಅಂತ ಗೊತ್ತಿಲ್ಲ, ಯಾಕ್ ಸಾಯ್ತೀವಿ ಅಂತ ಗೊತ್ತಿಲ್ಲ, ಯಾರ್ ತಪ್ಪಿಗೆ ತಾವ್ ಸಾಯಬೇಕು ಅಂತಾನೂ ಗೊತ್ತಿಲ್ಲ! ನಮ್ ತಪ್ಪಿಗೆ ಶಿಕ್ಷೆ ಅನುಭವಿಸೋದ್ ಬಂದ್ರೆ ಕೆಲವೊಂದು ಸಲ ಸಹಿಸೋಕಾಗಲ್ಲ , ಅವ್ರು ಬೇರೆಯವರ ತಪ್ಪಿಗೆ ಜೀವಾನೇ ಕೊಡಬೇಕು. ಜೀವನ ಎಷ್ಟು ಸುಂದರ ಅಲ್ವ ಅಂತ. ಅದರಲ್ಲಿ ಸುಂದರ ಅನ್ನೋದೇನ್ ಬಂತು ಅಂತ ಇನ್ನೂ ಅರ್ಥ ಆಗಿಲ್ಲ. ನಿನ್ನ ಮಾತ್ ಕೇಳಿ ನಾನೂ ಭಾವುಕನಾಗಿ ನಿನ್ನೇ ನೋಡ್ತಿದ್ದೆ, ಊಟ ಆಯ್ತಾ ಕೇಳ್ದೆ ನೀನು , ಹೌದು ಅಂದೆ ನಾನು, ಅಷ್ಟಕ್ಕೇ ನನ್ ತಲೆಗೂದಲಿನ ಅಸ್ತಿತ್ವ ಪ್ರಶ್ನಿಸಿದ್ದು ನಿಜಕ್ಕೂ ಶೋಚನೀಯ. ನೀನ್ ಒಂಥರಾ ನಂಗೆ ಎಲ್ಲ ಚಾನೆಲ್ ಗಳೂ ಪ್ರಸಾರವಾಗುವ ಏಕೈಕ ಟಿವಿ ಥರ ಇರ್ತಿದ್ದೆ. ನಿನ್ನ ಕೆಲವು ರೀತಿಗಳು ನಾ ಅಂದುಕೊಂಡಿದ್ದ ಪ್ರೀತಿಯ ವ್ಯಾಖ್ಯಾನವನ್ನೇ ಬದಲಿಸಿದವು.
ಒಂದು ದಿನ ಸಂಜೆ ಅತ್ತ ದಿಗಂತದಲ್ಲಿ ಸೂರ್ಯ ಭಗವಂತನ ಪಾದ ಸೇರಲು ಹೊಂಚು ಹಾಕುತ್ತಿದ್ದರೆ ನೀನು ನನಗೆ ಒಲವಿನ ಅರಿವು ಮೂಡಿಸುವ ಸಲುವಾಗಿ ಕೇಳಿ ತಿಳಿ ಕಾರ್ಯಕ್ರಮ ಆಯೋಜಿಸಿದ್ದೆ. ನಾನೂ ಬೇರೆ ಉಪಾಯ ಹೊಳೆಯದ ಅಮಾಯಕನಂತೆ ಕೇಳಲಾರಂಭಿಸಿದೆ. "ಪ್ರೀತಿ ಅಂದ್ರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಇರುವಂಥದ್ದಲ್ಲ, ಪ್ರೀತಿ ಅಂದ್ರೆ ಕನಸಲ್ಲೂ ಬಂದು ಕಾಡುವಂಥದ್ದಲ್ಲ, ಪ್ರೀತಿ ಅಂದ್ರೆ ಬೇರೆ ಕೆಲಸದಲ್ಲಿ ವ್ಯಸ್ಥವಾಗಿರುವಾಗಲೂ ಪದೇ ಪದೇ ನೆನಪಾಗುವುದಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಪ್ರೀತಿ ಅಂದ್ರೆ ಬರಿ ಪ್ರೀತಿಸುವುದಷ್ಟೇ ಅಲ್ಲ!! ನಿನ್ನ ನಿದ್ರೆಗೆ ಅಡ್ಡಿಯಾಗದಂತೆ, ನೀ ಮಾಡುವ ಕೆಲಸದಲ್ಲಿ ತೊಂದರೆಯಾಗದಂತೆ, ನಿನ್ನ ಸಮಯಹರಣಕ್ಕೆ ನೆಪವಾಗದಂತೆ ಇರುವ ರೀತಿ. ಪ್ರೀತಿ ಭರವಸೆ, ಪ್ರೀತಿ ಸಡಗರ, ಇರದ ಸಮಸ್ಯೆಗಳಿಗೆ ಇರುವ ಒಂದು ಪರಿಹಾರ. ನಿನ್ನನ್ನು ನೀನಾಗಿರಲು ಬಿಟ್ಟು ನನ್ನನ್ನೂ ನಿನಗೆಂದು ಇಟ್ಟು ನೀ ಬಯಸದಿದ್ದರೂ ಮಾಡಬೇಕೆನಿಸುವ ಉಪಕಾರ. ನನ್ನಲ್ಲಿ ನಾನು ಹೇಗೋ, ನನ್ನಲ್ಲಿ ನೀನೂ ಕೂಡ ಎಂಬ ಭಾವನೆ" ಇಷ್ಟು ಹೇಳಿ ನಿನ್ನ ಪ್ರಕಾರ ಪ್ರೀತಿ ಅಂದರೆ ಏನು ಅಂದೆ, "ನಾ ಹಂಸಲೇಖ ನೀ ಸರಳ ವಿರಳ ಸುಂದರಿ , ನಮ್ದು ರಾಗಿ ಹೊಲದಾಗೆ ಖಾಲಿ ಗುಡಿಸಲು" ನನ್ನ ಈ ಸಾಲಿಗೆ ನೀ ವ್ಯಕ್ತಪಡಿಸಿದ ಮುಖಭಾವ ನವರಸಗಳಿಗೂ ತಮ್ಮ ಖಾಲಿತನದ ಅನುಭವ ಆಗುವಂತಿತ್ತು.
ಸಣ್ಣ ಪುಟ್ಟದ್ದನ್ನೂ ನೀ ನೋಡೋ ರೀತಿ, ಸಂತೋಷ ಅಂದ್ರೆ ಇಲ್ಲದೆ ಇರೋದು ಸಿಗೋದಷ್ಟೇ ಅಲ್ಲ ಅನ್ನೋದ್ ಗೊತ್ತಾಗೋ ಹಾಗೆ ಮಾದುತ್ತಿತ್ತು. ನಾ ಬದುಕನ್ನೇ ಪ್ರೀತಿಸಲಾರಂಭಿಸಿದ್ದೆ, ಬಹುಷಃ ಅಲ್ಲಿಂದಲೇ ನನ್ನ ಖುಷಿಯ ಅರ್ಥವೂ ಬದಲಾಗಿದ್ದು. ಯಾರೇ ನಿನ್ನ ಅಸ್ತಿತ್ವವನ್ನು ಪ್ರಶ್ನಿಸಿದರೂ ನೀ ಮಾತ್ರ ನನ್ನಲ್ಲಿ ಸದಾ ಪ್ರಸ್ತುತ. ಅಳುವ ಮಗುವಿನ ಕಣ್ಣಲ್ಲೂ, ಬಯ್ಯುವ ಅಪ್ಪನ ಮಾತಲ್ಲೂ, ಚೇಂಜ್ ಇಲ್ಲ ಅಂದರೂ ಪರವಾಗಿಲ್ಲ ಬಿಡಿ ಎಂದು ನಗುವ ತರಕಾರಿ ಅಂಗಡಿ ಹೆಂಗಸಿನ ಮನಸಲ್ಲೂ .